ವಾಷಿಂಗ್ಟನ್: ಇಷ್ಟು ದಿನ ಆಪ್ತ ಸ್ನೇಹಿತರಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಈಗ ಶತ್ರುಗಳಾಗಿದ್ದಾರೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಎಲಾನ್ ಮಸ್ಕ್ ಜೊತೆ ನಡೆದ ಬಿಸಿ ವಿನಿಮಯದ ನಂತರ, ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರೊಂದಿಗೆ ನನಗೆ ಯಾವ ದ್ವೇಷವೂ ಇಲ್ಲ. ಆದರೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಜೊತೆ ಮಾತನಾಡಲು ನನಗೆ ಆಸಕ್ತಿ ಇಲ್ಲ. ಈ ದಿನದ ನಂತರ ಎಲಾನ್ ಮಸ್ಕ್ ಅವರೊಂದಿಗೆ ಮಾತುಕತೆ ನಡೆಸುವುದರ ಬಗ್ಗೆ ಕೇಳಿದಾಗ, “ನೀವು ಮನಸಿನ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯ ಬಗ್ಗೆ ಕೇಳುತ್ತಿದ್ದೀರಾ?” ಎಂದು ಟೀಕಿಸಿದರು.
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಟೀಕಿಸಿದ ನಂತರ ಟ್ರಂಪ್ ಮತ್ತು ಮಸ್ಕ್ ನಡುವಿನ ಬಿರುಕು ಭುಗಿಲೆದ್ದಿತು. ಗುರುವಾರ ಈ ಉದ್ವಿಗ್ನತೆ ಹೊಸ ಎತ್ತರವನ್ನು ತಲುಪಿತು. ಅಮೆರಿಕ ಅಧ್ಯಕ್ಷ ಟ್ರಂಪ್ 2024ರ ಚುನಾವಣಾ ಗೆಲುವಿನಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಳ್ಳದಿದ್ದಕ್ಕಾಗಿ ಎಲಾನ್ ಮಸ್ಕ್ ಟ್ರಂಪ್ ಅವರನ್ನು “ಕೃತಘ್ನ” ಎಂದು ಆರೋಪಿಸಿದರು. “ನಾನು ಇಲ್ಲದಿದ್ದರೆ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು” ಎಂದು ಮಸ್ಕ್ ಟ್ವೀಟ್ ಮಾಡಿದ್ದರು.