ಟಾಲಿವುಡ್ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ಅವರು ಜೂನ್ 6ರಂದು ಝೈನಾಬ್ ಜೊತೆ ವಿವಾಹ ಆದರು. ಇದರ ಆರತಕ್ಷತೆ ಜೂನ್ 8ರಂದು ನಡೆಯಿತು. ಇದಕ್ಕೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದರು. ಅದರ ಫೋಟೋಗಳು ವೈರಲ್ ಆಗಿವೆ.
ಅಕ್ಕಿನೇನಿ ನಾಗಾರ್ಜುನ ಮಗ ಅಖಿಲ್ ವಿವಾಹಕ್ಕೆ ಯಶ್ ಅವರಿಗೆ ವಿಶೇಷ ಆಹ್ವಾನ ಇತ್ತು. ಅವರು ಮಿಸ್ ಮಾಡದೇ ಈ ವಿವಾಹಕ್ಕೆ ಆಗಮಿಸಿದರು. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯಶ್ ಅವರ ಹೊಸ ಲುಕ್ ಗಮನ ಸೆಳೆದಿದೆ. ಅವರು ರಾಯಲ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರದ್ದು ಬೇರೆಯದೇ ರೀತಿಯ ಗತ್ತು ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.